Gejjeya katti odi odi baa baa song lyrics

Gejjeya katti odi odi baa baa song lyrics

ಗೆಜ್ಜೆಯ ಕಟ್ಟಿ ಓಡಿ ಓಡಿ ಬಾ ಬಾ

ಒ ಗೋಪಿಯ ಕ್ರಷ್ಣ ಆಡಿ ಓಡಿ ಬಾ ಬಾ

||ಗೆಜ್ಜೆಯ||


ನಿನ್ನ ಪುಟ್ಟ ಪಾದ ತೋರಲೆಂದೆ ಬಾರೊ

ನಿನ್ನ ದಿವ್ಯ ನಾಮ ಪಾಡಿ ನಿಂತೆ ಬಾರೊ

||ನಿನ್ನ ಪುಟ್ಟ||

ಓ…ಓ… ||ಗೆಜ್ಜೆಯ||


ದೇವಕಿ ನಂದನ ಕಾನನವಾಸ

ಕೇಶವ ಹರಿ ಮಾಧವ

ದೇವಕಿನಂದನ ರಾಧ ದೇವನೆ

ಕೇಶವ ಹರಿ ಮಾಧವ

ಗೋಕುಲ ಬಾಲಕ ಓಡಿ ಬಾ ಬಾ

ಗೋಪಾಲ ಬಾಲಕ ಆಡಿ ಬಾ ಬಾ

||ಗೋಕುಲ||

||ಗೆಜ್ಜೆಯ||


ಪಾಂಡವ ರಕ್ಷಕ ಪಾಪ ವಿನಾಶಕ

ಕೇಶವ ಹರಿ ಮಾಧವ

ಅರ್ಜುನ ಸಾರಥಿ ಅಜ್ಞಾನ ನಾಶಕ

ಕೇಶವ ಹರಿ ಮಾಧವ

ಗೀತಾ ಭೋಧಕ ಓಡಿ ಬಾ ಬಾ

ಹ್ರದಯಾನಂದಕ ಆಡಿ ಬಾ ಬಾ||ಗೀತಾ||

||ಗೆಜ್ಜೆಯ||


ಕಂಸ ಮರ್ದನ , ಕಾಳಿಂಗ ಮರ್ದನ

ಕೇಶವ ಹರಿ ಮಾಧವ

ಆಶ್ರಿತ ವತ್ಸಲ ,ಆಪತ್ಭಾಂಧವ

ಕೇಶವ ಹರಿ ಮಾಧವ

ಓ೦ಕಾರ ನಾಮವೆ ಓಡಿ ಬಾ ಬಾ

ಆನಂದ ಗೀತವ ಆಡಿ ಬಾ ಬಾ

‌‌‌ ‌‌‌‌‌ ||ಓಂಕಾರ||

||ಗೆಜ್ಜೆಯ|| 

Leave a Comment